Tuesday, 15 November 2011

ನನಗೆ
ದುಖಃವಾಗಿದ್ದು
ನೀನು ನನ್ನ
ಬಿಟ್ಟು ಹೋದದ್ದಕ್ಕಲ್ಲ
ನನ್ನ
ಕಳೆದುಕೊಂಡಿದ್ದಕ್ಕೆ ..

Saturday, 12 November 2011

ಸುಮ್ಮನಿದ್ದು
ಬಿಡು ಮನವೇ
ನನ್ನೆದೆಯ
ತಿಳಿಗೊಳದಿ
ಅವಳ
ನೆನಪುಗಳ ತೇಲಿ ಬಿಟ್ಟು
ರಾಡಿಯೆಬ್ಬಿಸದಿರು
ಹೊಸದೊಂದು
ಮೊಗ್ಗು ನನ್ನೊಳಗೆ
ಹೂವಾಗುವ ಪುಳಕ
ಮತ್ತೆ
ಆಟ
ಕೆಡಿಸದಿರು...
ನಿನ್ನಲ್ಲಿ
ನಾನಿಲ್ಲ
ಹಾಗಾಗಿ
ನೀ ಮುಡಿವ
ಮಲ್ಲಿಗೆಗೂ
ಘಮವಿಲ್ಲ ....

Friday, 11 November 2011

ನಿನ್ನ
ನೆನಪಿಗೂ
ನನ್ನ
ಕಣ್ಣೀರಿಗೂ
ಎಂಥ ಗೆಳೆತನ
ಒಂದನ್ನೊಂದು
ಅಗಲುವುದೇ ಇಲ್ಲ

Thursday, 10 November 2011

ಸಾಕು
ಕರುಳ ಬಗೆಯುವ
ಕ್ರೌರ್ಯಕ್ಕೆ
ಹುಸಿನಗೆಯ
ಮುಲಾಮು ಹಚ್ಚಿ
ನಾವೆಲ್ಲಾ ಒಂದೇ ಎಂದಿದ್ದು
ಒಳಗೂ ಹೊರಗೂ
ಇರಿಯುವ
ಕತ್ತಲಲಿ ಭರವಸೆಯ
ಬೆಳಕಿಗಾಗಿ ನಾವು
ಕಣ್ಣನ್ನೇ ಕುರುಡಾಗಿಸಿಕೊಂಡವರು
ಚೂರಿಯ ತುದಿಗೆ
ನೀವು ನಮ್ಮವರೇ ಎಂಬ
ನಂಬಿಕೆಯ ವಿಷ ತುಂಬಿ
ತಣ್ಣಗೆ
ಕೊಂದವರು ನೀವು
ಆದರೂ
ನಮ್ಮ ಗುಟುಕು ಜೀವದೊಳಗಿನ
ಹುಂಬ ವಿಶ್ವಾಸ
ಕೃಶಗೊಂಡ ರಟ್ಟೆಗಳಿಗಿರುವ
ಮೇಲೇಳುವ ತಾಕತ್ತು
ಇನ್ನು ಉಸಿರಾಡುವಂತೆ
ನೋಡಿಕೊಳ್ಳುತಿದೆ...

Tuesday, 8 November 2011

ನಿನ್ನ
ಒಲವಿನ
ರಕ್ಷೆಯಲಿ
ನನ್ನ ಕನಸುಗಳ
ಅನಾವರಣ
ಅವು ನಿಜವಾಗುವ
ಮೊದಲೇ ಕಕ್ಷೆ
ಬದಲಿಸಿದೆ
ವಿನಾಕಾರಣ .

ನಿನ್ನ
ನೆನಪೆಂದರೆ
ಹಗಲು ನುಂಗಿದ
ಇರುಳಿನಲಿ
ದುಃಸ್ವಪ್ನಗಳ
ಸಾಲು ದೀಪ
ಹಚ್ಚಿಟ್ಟಂತೆ

Monday, 7 November 2011


ನೀನು
ನಿಜವಾಗದ
ಕನಸೆಂದು
ನನ್ನ ಮನಸಿಗೆ  ಗೊತ್ತಿದೆ
ಕನಸಿನಲ್ಲಾದರೂ
ನಿಜವಾಗಲಿ ಎಂದು
ಅದು ಕಾಯ್ತಿದೆ ..
ಪ್ರೀತಿ

ಮುಂಜಾನೆಯ
ಎಳೆ ಬಿಸಿಲ
ಸ್ಪರ್ಶಕ್ಕೆ
ಮಂಜು ಕರಗಿ
ನೀರಾದ ರೀತಿ