ಗುರು ದುನಿಯಾ
ಕಣ್ಣಿಗೆ ಕಂಡದ್ದು , ಮನಸಿಗೆ ತೋಚಿದ್ದು..... ಹೀಗಿದೆ ನೋಡು ಗೆಳೆಯ....
Monday, 29 August 2011
ಹುಡುಗಿ
ನಿನ್ನ
ಕಣ್ಣಂಚಿಗೆ
ಅದರ
ಸುಳಿಮಿಂಚಿನ ಸಂಚಿಗೆ
ಬಲಿಯಾದೆ
ಈಗ
ರಸ್ತೆಯಂಚಲೇ
ನೆಲೆಯಾದೆ ...
ನಿನ್ನ
ನೆನಪೆಲ್ಲ
ಕಣ್ಣೀರಾಗಿ
ಸುರಿದ ಮೇಲೆ
ಮನಸೀಗ
ಶುಭ್ರ ಶಾಂತ ಸರೋವರ ....
ನಿನ್ನ ಪಾಲಿಗೆ
ನಾನು
ಮುಗಿದ ಅಧ್ಯಾಯ
ಸಂತೋಷವೆಂದರೆ
ನನ್ನ ಬದುಕಿಗೂ
ಇಂದೇ ವಿಧಾಯ
ಹುಣ್ಣಿಮೆಯ
ಚಂದ್ರ
ನಗುತ್ತಿದ್ದಾನೆ
ಇರುಳು
ಬೆತ್ತಲಾಗುತ್ತಿದೆ ....
Newer Posts
Older Posts
Home
Subscribe to:
Comments (Atom)