Wednesday 31 October 2012

ಕೆರೆದಷ್ಟೂ ವ್ರಣ ಗಾಯ ಮತ್ತು ನೆನಪು

ಅವಳು ಹರಿವ ನದಿ 
ನಾನು ತೇಲುವ ತೆಪ್ಪ 
ಅವಳು ನಿಲ್ಲ್ಳುವುದಿಲ್ಲ 
ನಾನು ಮುಳುಗುವುದಿಲ್ಲ 
ಅವಳು ವಿಶಾಲ ಹರವಿನಲ್ಲಿ
ಬಳುಕಿ ಬಳಲಿ 
ಮೈ ಮುರಿಯುತ್ತಾಳೆ 
ನಾನು ಸೋತಂತೆ 

ಕೈ ಚಾಚಿ
ಮೈ ಮರೆಯುತ್ತೇನೆ
ಸುಳಿವು ಕೊಡದ ಸುಳಿಗೆ
ಸಾವಿರ ಕಣ್ಣು
ವಿವೇಕದ ಹಂಗಿಗೆ ಬಿದ್ದ
ನದಿ ಮತ್ತು ತೆಪ್ಪದ ಅಹಂ
ಈಗ ರಾಜಿಯಾಗಿವೆ
ಹಸಿವು ತೀರದ ವಂಚಕ ಸುಳಿಗೆ
ಎಷ್ಟೊಂದು ನಿರಾಸೆ...

Wednesday 11 July 2012

ಎಲ್ಲ ನೋವಿಗೂ 
ಕಾಲವೇ ಔಷದ 
ಎಂಬ ಮಾತಿನಲ್ಲಿ ನನಗೆ ವಿಪರೀತ ನಂಬಿಕೆ 
ಹಾಗಾಗಿಯೇ ನಾನು ಮತ್ತೆ ಮತ್ತೆ 
ನಿನ್ನ ಬಳಿಗೆ ಬರುತ್ತೇನೆ 
ನೀನೋ ಮತ್ತದೇ ಅಸಹನೆಯ ಚಾದರ ಹೊದ್ದು 
ನನ್ನಾತ್ಮದ ಅಣು ಅಣುವಿಗೂ 
ಅವಮಾನದ ಪರದೆ ಹೊದಿಸಿ, ಗೆದ್ದೆನೆಂದು ಬೀಗುತಿ 
ಇರಲಿ ,ಇಂಚಿಂಚೆ ನಿನ್ನತನವನ್ನ ಕೊಂದ 
ನನ್ನ ಅಹಮ್ಮಿಗೆ ,ನನ್ನ ಕ್ರೌರ್ಯಕ್ಕೆ 
ನೀನಿತ್ತ ಮೊದಲ ಉತ್ತರ ಎಂದರೂ ಸರಿಯೇ
ಒಪ್ಪಿಕೊಳ್ಳುತ್ತೇನೆ
ನಿನ್ನಾತ್ಮ ಸಖ ನಾನು ,ಸುಖದ ನೆನಪುಗಳನ್ನಷ್ಟೇ
ನಾಳೆಯ ಕನಸಾಗಿಸಿಕೊಂಡರೆ ಮತ್ತೊಮ್ಮೆ ನಿನಗೆ
ಪ್ರಿಯವಾಗಲಾರೆನೆ ?
ನಿನ್ನಲ್ಲಿ ಮೂಡಿದ ನನ್ನ ಗುರುತುಗಳಿಗೆ
ಒಮ್ಮೆಯಾದರೂ ನಾನು ನೆನಪಾಗಲಾರೆನೆ
ನನ್ನ ದೇಹದ ಕಸುವನ್ನು ಇಷ್ಟಿಷ್ಟೇ ಕಸಿದುಕೊಂಡ
ಋಣಕ್ಕಾದರೂ ನಾನು ಇನ್ನಷ್ಟು ಆಪ್ತವಾಗಲಾರೆನೆ
ಬಿಡು ,ಏನೂ ಹೇಳದ,ನೀನು ಕೇಳದ ಖಾಲಿ ಮಾತೇಕೆ
ಎಲ್ಲವನು ಕ್ಷಮಿಸಿ ಸುಮ್ಮನೊಮ್ಮೆ ನೋಡಿಬಿಡು
ನನ್ನ ಗುರುವೂ ,ವರವೂ ಆದ ಕಾಲವನ್ನೇ
ಸಾಕ್ಷಿಯನ್ನಾಗಿಸಿ ನಿನಗೆ ಮಾತು ನೀಡುತ್ತೇನೆ
ನನ್ನೊಳಗಿನ ವಿಕಾರಗಳ ಸುಟ್ಟು ,
ಪ್ರೀತಿಯ ಗಿಡ ನೆಟ್ಟು ,ಅಂತಃ ಕರಣದ ಹೂ ಬಿಟ್ಟು
ಘಮ ಘಮಿಸುವಂತೆ ಅಂತರಂಗವನ್ನು ಅಣಿ ಮಾಡಿಕೊಳ್ಳುತ್ತೇನೆ
ಇನ್ನು ಕೇವಲ ಪ್ರೀತಿಸುತ್ತೇನೆ ,
ನನ್ನನ್ನು, ನನ್ನ ಬದುಕಾದ ನಿನ್ನನ್ನು .
ನಾನು ನಿನ್ನ ನೋಡಿ 
ನೀನು ನನ್ನ ನೋಡಿ 
ಕಣ್ಣಲ್ಲೇ ಮಾಡಿ ಮೋಡಿ
ಅಳೆದು ತೂಗಿ 
ಪ್ರೀತಿ ಮಾಗಿ 
ಜೊತೆಯಲ್ಲೇ ಉಂಡೆವು 
ಬೆವರಲ್ಲಿ ಮಿಂದೆವು 
ಈಗ 
ಪ್ರೀತಿಯೂ ಹೊರೆ 
ಇಳಿಸಿಕೊಳ್ಳುವ ಹಂಬಲ ನಿನಗೆ 
ಕಳಚಿಕೊಂಡರೆ ಸಾಕೆನಗೆ

Friday 25 May 2012

ಪ್ರೇಮ ಮತ್ತು ಹಸಿವು ಮಾತ್ರ ಮನುಷ್ಯನನ್ನು ಜೀವಂತಿಕೆಯಿಂದ ಇಡಬಲ್ಲವು.
ಮಳೆಯೆಂದರೆ
ಅವಳ ನೆನಪು
ಕಣ್ಣ ಹೊಳಪು
ಮೈಯ ಒನಪು
ಕಿಬ್ಬೊಟ್ಟೆ ಯಾಳದಲಿ
ಸಣ್ಣಗೆ ಕದಲುವ ನೋವು

ಮಳೆಯೆಂದರೆ

ಅರಳುವ ಆಸೆ
ಕೆರಳುವ ಕಾಮ
ಹರಿಯುವ ಬೆವರು
ಸುರಿದುಕೊಳ್ಳುವ ಸುಖ

ಮಳೆಯೆಂದರೆ

ಸುದೀರ್ಘ ರಾತ್ರಿ
ದಣಿಯದ ದೇಹ
ಮುಗಿಯದ ಕನಸು
ಪರವಶ ಮನಸು

ಮಳೆಯೆಂದರೆ

ಚಿಕ್ಕದೊಂದು ಸೋಲು
ಬಹು ದೊಡ್ಡ ಗೆಲುವು
ಅತೃಪ್ತ ಆಕಾಂಕ್ಷೆ
ಯುದ್ದ ಗೆದ್ದ ಅಹಂಕಾರ ....

ಮತ್ತು ಮಳೆಯೆಂದರೆ

ಅವಳ ತಿರುವುಗಳು
ಮತ್ತದೇ ಸೆಳವುಗಳು
ಹಸಿ ಹಸಿ ಬಯಕೆಗಳು
ಬಿಸಿ ಬಿಸಿ ನೆನಪುಗಳು

ಏಕಾಂತವನ್ನು
ಕೆಣಕುವ
ನಿನ್ನ ಹಲ್ಕಟ್ಟ ನಗೆಗೆ
ನನ್ನ ಅಂಗಾಂಗಗಳೆಲ್ಲ
ಪುಳಕಗೊಂಡಿವೆ
ನಾಳೆಗಿರಲಿ ಎಂದು
ಎತ್ತಿಟ್ಟುಕೊಂಡ ನನ್ನ
ಕೆಲವು ಕನಸುಗಳು
ಬದುಕು ಸಿಂಗಾರಗೊಂಡ
ಸಂಭ್ರಮದಲ್ಲಿ ಮರೆತೇ ಹೋಗಿವೆ
ನಿಸ್ತೇಜ ಕಣ್ಣುಗಳಲ್ಲಿ , ನಿಶಾಚರ ರಾತ್ರಿಗಳಲ್ಲಿ
ಸಿಕ್ಕು ,ಬಿಕ್ಕುವ ಏಕಾಂತದಲ್ಲಿ
ಗೆಳೆಯನಂತೆ ಆತುಕೊಂಡ
ಜೀವನ್ಮುಖಿ ಕನಸುಗಳು
ಸುಖದ ಕನವರಿಕೆಯಲಿ
ಕಳೆದೆ ಹೋಗಿವೆ
ಅಲ್ಲಲ್ಲಿ ಬಿದ್ದು ಇನ್ನೆಲ್ಲೋ ಎದ್ದು
ಒಂದಿಷ್ಟು ಪಡೆದು ,ಒಂದಿಷ್ಟು ಕಳೆದು
ನಿರ್ಲಿಪ್ತವಾಗುವ ಮುನ್ನ ಮನಸು
ಕೈ ಹಿಡಿದು ಕಾಪಾಡಿದ ಕನಸುಗಳು
ಮಾತಿಲ್ಲದೆ ಮರೆಯಾಗಿವೆ

Wednesday 7 March 2012

ಇವಳಪ್ಪುಗೆಯಲ್ಲಿ
ಸುಖಿಸುವಾಗಲೆಲ್ಲ
ಅವಳ
ನೆನಪುಗಳು
ಮರುಕಳಿಸುತ್ತವೆ ..
ಹಿಂದಿನ ರಾತ್ರಿ
ಅವರುಗಳು ಸುಖಿಸಿದ
ಗುರುತುಗಳನ್ನು
ಬೆಳಗಿನ
ನಾಜೂಕು ಗಾಳಿ ಸದ್ದಿಲ್ಲದೇ
ಗುಡಿಸುತ್ತಿದೆ
ಈಗಷ್ಟೇ ಮಂಪರಿನಿಂದ
ಎಚ್ಚೆತ್ತ ಸೋಮಾರಿ ನಗರ
ಮತ್ತೆ ರಾತ್ರಿಗೆ ಕಾಯುತ್ತಿದೆ
ಈ ರೊಟೀನು ಚಕ್ರಕ್ಕೆ
ಸಿಕ್ಕ ಮನುಷ್ಯನ ಆತ್ಮ
ಸತ್ತು ಯಾವುದೋ ಕಾಲವಾಗಿದೆ ..
ಇಲ್ಲಿ ಕಾಲವೂ
ಉಸಿರು ಬಿಗಿ
ಹಿಡಿದು ಚಲಿಸುತ್ತದೆ
ಅದೆಷ್ಟೋ ನಿಟ್ಟುಸಿರುಗಳ
ಯಾತನೆಗೆ ಮರುಗಿ
ಒಮ್ಮೊಮ್ಮೆ
ನಿಂತೇ ಬಿಡುತ್ತದೆ
ಹಸಿ ಹಸಿ ಕಾಂಕ್ಷೆಗಳ
ಬಿಸಿಗೆ ಸಿಕ್ಕು
ಅರೆ ಸತ್ತ ಭ್ರೂಣಗಳಿಗೆ
ಸಾಕ್ಷಿಯಾಗಿ
ಈಗ ಎಲ್ಲವೂ
ಎಂದಿನಂತೆ
ಹೊಸ ಮುಖಗಳಲ್ಲೂ
ಹಳೆಯ ಸುಖದ
ಕನವರಿಕೆ
ಅವರೀಗ
ನಾಳೆಗೆ ಕಾಯುವುದಿಲ್ಲ
ಆಕಾಶ ದಿಟ್ಟಿಸುತ್ತ
ಅವಕಾಶ ಹುಡುಕುವುದಿಲ್ಲ
ಕೆನ್ನೆಯ ಮೇಲೆ ಕಣ್ಣೀರ ಗುರುತೆಲ್ಲ
ಕರಗಿ ಅಗ್ಗದ ನಗುವಿಗೆ
ಒಗ್ಗಿ ಹೋಗಿದ್ದಾರೆ
ಬಜಾರಿನ ಬಯಕೆಗಳು
ಬರಿದಾಗುವ ತನಕ
ಕಾಲವೂ
ಅವರಿಗೆ ಜೊತೆ ನೀಡುವ
ಮಾತು ಕೊಟ್ಟಿದೆ .

Friday 2 March 2012

ನೀನು ಒಳಗೆ ಬರೋದಾದ್ರೆ
ಈ ಹೃದಯದ ಬಾಗಿಲಿಗೆ
ಆ ಚಂದ್ರನನ್ನೇ ತೋರಣ
ಮಾಡಿ ಕಟ್ತೀನಿ
ಖಾಯಮ್ಮಾಗಿ ಒಳಗೆ
ಇರೋದಾದ್ರೆ
ನಿನ್ ಬದುಕಲ್ಲಿ ಯಾವತ್ತು
ಅಮಾವಾಸ್ಯೆ ಬರದಂಗೆ
ನೋಡ್ಕೋತೀನಿ

Wednesday 22 February 2012

ಪುಡಿಗಾಸಿಗಾಗಿ
ದಿನವಿಡೀ
ಚಪ್ಪಲಿ
ಹೊಲೆಯುವವನ
ಕಾಲಿಗೆ ಸರಿಯಾದ
ಸೈಜು
ಇನ್ನು ಸಿಕ್ಕಿಲ್ಲವಂತೆ ...

Friday 17 February 2012

ನನ್ನ ಹಿಂಗೆ ಕೊಲಬೇಡ ಕೊಲಬೇಡ ಕೊಲಬೇಡ ಲೇ
ನನ್ನ ಹಾರ್ಟು ವೀಕು ವೀಕು
ನಿನ್ನ ಲವ್ವು ಫೇಕು ಫೇಕು
ಲ ಲ ಲ ಲ ಲ ಲ ಲ ಲ ಲ ಲ
ನಿನ್ನ ನೋಡಿ ಫಾಲ್ ಇನ್ ಲವ್ವು
ನೀನು ಗಿವ್ ಮಿ ಓನ್ಲಿ ನೊವ್ವು
ನನ್ನ ಹಿಂಗೆ ಕೊಲಬೇಡ ಕೊಲಬೇಡ ಕೊಲಬೇಡ ಲೇ
ಡೈಲಿ ಶೇವು ,ವೀಕ್ಲಿ ಮೂವಿ ,ಮನಸು ಫುಲ್ ಜುಮ್ ಜುಮ್
ಮಂತ್ರಿ ಮಾಲು ,ಪಿ ವಿ ಆರು ಎಲ್ಲೆಲ್ಲೂ ಹಮ್ ತುಮ್
ಲ ಲ ಲ ಲ ಲ ಲ ಲ ಲ ಲ ಲ ಲ
ಕೈಲಿ ಬಿಯರು , ಹಾರ್ಟು ಚೂರು
ನಾಟ್ ಕಮಿಂಗು ಡ್ರೀಮ್ಸ್
ನನ್ನ ಹಿಂಗೆ ಕೊಲಬೇಡ ಕೊಲಬೇಡ ಕೊಲಬೇಡ ಲೇ

Thursday 16 February 2012

ಮೇರ ದಿಲ್ ಕಾ ಗಲ್ಲಿ ಗಲ್ಲಿ ಮೇ
ನಿನ್ನ ನೆನಪು ಹರಿದಾಡ್ತಿದೆ
ಹಗಲು ರಾತ್ರಿ ಆಂಖ್ ಮೇ
ನಿನ್ನದೇ ರೂಪ ಸರಿದಾಡ್ತದೆ
ನೆನೆಸ್ಕೊಂಡ್ರೆ ಸಾಕು ಚುಪ್ಕೆ
ನನ್ನ ದಿಲ್ ಕ ಒಳಗೆ ಪುಳಕ
ಪ್ರೀತಿಸ್ತೀನಿ ಅಂತ ಆಪ್ಕೆ
ಹೇಳೋದಿಕ್ಕೆ ನಡುಕ
ಒಪ್ಕೊಂಡ್ ಬಿಟ್ರೆ ನನ್ನ ಪ್ಯಾರ್ ನ
ನೀನೆ ಮೇರ ದಿಲ್ ಕ ರಾಣಿ
ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೋತೀನಿ
ದೂಸ್ರ ಮಾತೇ ಇಲ್ಲ ,ನಂಬು ನನ್ನಾಣೆ ..

Monday 13 February 2012

ಜಡ್ಡುಗಟ್ಟಿದ ದೇಹ
ಬಿರಿದ ಅಂಗಾಲು
ಸಿಮೆಂಟು ಧೂಳಿನಲಿ
ಬದುಕಿನ ಕನಸು ಮಸುಕು ಮಸುಕು
ಚೀಲಕ್ಕೆ ಕೊಕ್ಕೆಯಿಟ್ಟು
ಹೆಗಲ ಮೇಲೇರಿಸಿ
ಹೆಜ್ಜೆ ಮುಂದಿಟ್ಟಾಗ ಎದೆಯಲ್ಲಿ
ಹಸಿವಿನ ರುದ್ರ ನರ್ತನ
ತಿಂದ ಅನ್ನ ಅರಗುವುದಿಲ್ಲ
ಅವನಿಗಾಗಿ
ಯಾವ ಜೀವವು ಮರುಗುವುದಿಲ್ಲ
ಎದೆಯೊಳಗೆ ಕೆಂಡವಿಟ್ಟುಕೊಂಡವನ
ಸಂಕಟಕ್ಕೆ ಸಹಕಾರ ನೀಡಲು
ಕಣ್ಣೀರಿಗೂ ಮನಸಿಲ್ಲ ..

Friday 3 February 2012

ಕಣ್ಣು ಕಣ್ಣು ಮಿಲಾಖತ್ತು ರೋಡ್ ಮೇ
ಯಾರೋ ಚುಪ್ಕೆ ನೂಕಿದಂಗಾಯ್ತು ಪ್ಯಾರ್ ಮೇ

ದಿಲ್ ಕ ಒಳಗೆ  ಯಾರೋ ಬಂದು ಸೇರ್ದಂಗೆ

ಕುಣಿತಾಯ್ತೆ ಮನಸು ಶರಾಬು ಕುಡಿದಂಗೆ

ಬರೀ ಜಾನಂ ದೇ  ರೂಪ   ಮೇರೆ ಆಂಖ್  ಸೆ

ತುಂಬಾನೇ ಪ್ರೀತಿಸ್ತೀನಿ ದಿಲ್ ಸೆ

ಹಾಗೆ ಸುಮ್ನೆ ಸಿಗಬಾರದೇ ಏಕ್  ಬಾರ್

ಆಗೇ ಬಿಡ್ಲಿ ನಂದು ನಿಂದು ದಿಲ್ ಗೆ ಪ್ಯಾರ್