Tuesday, 18 October 2011

ನನ್
ಹೃದಯದಲ್ಲಿ
ಜಾಗ ಖಾಲಿ ಇದೆ
ಅಂತ ಇದುವರೆಗೂ
ಯಾವ್ ಹುಡ್ಗಿನೂ
ಜಾಹಿರಾತು ಕೊಟ್ಟಿಲ್ಲ

ಹಾಗಂತ
ಯಾವ್ ಹುಡುಗರೂ
ಹುಡುಗೀರ
ಅಪ್ಪಣೆ ಕೇಳಿ
ಅವರ ಹೃದಯದೊಳಗೆ
ಪ್ರವೇಶ ಮಾಡಿಲ್ಲ...
ಬದುಕು
ಯಾರೋ
ಬಿಸಾಕಿದ ದಾರಿ
ಸುಮ್ಮನೆ ನಡೆಯಬೇಕು
ಗುರುವು ಬೇಡ ,ಗುರಿಯೂ ಬೇಡ
ದೇಹ
ಚಲಿಸುತ್ತಿದೆ
ಅದಷ್ಟೇ ಸತ್ಯ
ಮತ್ತೆ ಅದರೊಳಗಿನ ಆತ್ಮ ?
ಸಂತೆಯೊಳಗೆ
ಮೌನ ಹುಡುಕಿದಂತೆ
ಎಡವಿದ್ದಕ್ಕೆ ರಕ್ತದ
ಸಾಕ್ಷಿಯಿದೆ
ಮತ್ತೆ ಎದ್ದಿದ್ದಕ್ಕೆ
ಅರ್ಧ ದಾರಿ ಸವೆದಿದೆ
ಗೆದ್ದಿದ್ದಕ್ಕೆ
ರೆಕ್ಕೆಯೇನು ಬಂದಿಲ್ಲ
ಸೋತಿದ್ದಕ್ಕೆ
ನನ್ನಲ್ಲಿ ನೆಪವಿಲ್ಲ ...