Wednesday, 31 October 2012

ಕೆರೆದಷ್ಟೂ ವ್ರಣ ಗಾಯ ಮತ್ತು ನೆನಪು

ಅವಳು ಹರಿವ ನದಿ 
ನಾನು ತೇಲುವ ತೆಪ್ಪ 
ಅವಳು ನಿಲ್ಲ್ಳುವುದಿಲ್ಲ 
ನಾನು ಮುಳುಗುವುದಿಲ್ಲ 
ಅವಳು ವಿಶಾಲ ಹರವಿನಲ್ಲಿ
ಬಳುಕಿ ಬಳಲಿ 
ಮೈ ಮುರಿಯುತ್ತಾಳೆ 
ನಾನು ಸೋತಂತೆ 

ಕೈ ಚಾಚಿ
ಮೈ ಮರೆಯುತ್ತೇನೆ
ಸುಳಿವು ಕೊಡದ ಸುಳಿಗೆ
ಸಾವಿರ ಕಣ್ಣು
ವಿವೇಕದ ಹಂಗಿಗೆ ಬಿದ್ದ
ನದಿ ಮತ್ತು ತೆಪ್ಪದ ಅಹಂ
ಈಗ ರಾಜಿಯಾಗಿವೆ
ಹಸಿವು ತೀರದ ವಂಚಕ ಸುಳಿಗೆ
ಎಷ್ಟೊಂದು ನಿರಾಸೆ...