Friday 16 September 2011

ನಿನ್ನೆಗಳಲ್ಲಿ ಮಲೆತು
ನಾರುತ್ತಿರುವ ಭವಿಷ್ಯದ ನಾಳೆಗಳನ್ನು
ವರ್ತಮಾನಕ್ಕೆ ತರಲು
ಹೆಣಗುತ್ತೇನೆ
 
ಕತ್ತು ತುಳಿದು
ಉಸಿರು ನಿಲ್ಲಿಸುವ
ಹರಾಮಿ ಹುನ್ನಾರಗಳ ಮೀರಿ
ಗರಿಕೆಯಾದರೂ ಸಿಗಲೆಂದು
ಆಸೆಯಿಂದ ಕೈ ಚಾಚುತ್ತೇನೆ
 
ಕಂಡರೂ ಕಾಣದಂತೆ ನಕ್ಕು
ಅಬ್ಬರಿಸುವ ಜೀವರೂಪದ ವಿರೂಪಗಳ
ಕೇಕೆಗೆ ಬೆಚ್ಚಿ ಭಯದಿ ಬಿಕ್ಕುತ್ತೇನೆ
 
ಸಾವಿರ ಸಂಕೋಲೆಗಳ ಬಿಗಿಬಂಧದಲ್ಲಿ
ನರಳುವ ನಿತ್ರಾಣ ದೇಹಕೆ ಕೊಂಚ
ಶಕ್ತಿ ತುಂಬಿ ,ಒಂದಿಷ್ಟು ಬೆಳಕು
ತೋರಿಸುವರಾರು ಎಂದು 
ಬಿದ್ದಲ್ಲೇ  ಬಡಬಡಿಸುತ್ತೇನೆ
 
ಸಂಚು ಹೂಡುವ ವಂಚಕ
ಭೂತಕಾಲದ ಇಕ್ಕಳದಲ್ಲಿ
ಸಿಕ್ಕು ಮತ್ತೆ ಮತ್ತೆ ಸಾಯುತ್ತೇನೆ
ತುಂಬ ಉತ್ಸಾಹ ಮತ್ತು ಲವಲವಿಕೆಯಿಂದಿದ್ದ ಆ ಹುಡುಗ ಇದ್ದಕ್ಕಿದ್ದಂತೆ ಮಂಕಾಗಿ ಹೋದ .
ಗೆಳೆಯರು ಏನಾಯಿತೆಂದು ಕೇಳಿದರು
ಅದಕ್ಕವನು
ಮದುವೆಯಾಯಿತೆಂದ .

ಒಂದು ಸಾಲಿನ ಕಥೆ

ಇವಳಿಂದ ಮುಕ್ತಿ ಬೇಕು ನನಗೆ ,ಇವಳನ್ನು ಮುಗಿಸಿಬಿಡಬೇಕು ಎಂದು ಕೊಳ್ಳುತ್ತಿದ್ದಂತೆ ಹೆಂಡತಿ ಕುಡಿಯಲು ಹಾಲು ತಂದು ಕೊಟ್ಟಳು .ಕುಡಿದವನು ಮತ್ತೆ ಮೇಲೇಳಲಿಲ್ಲ .ಅವನಿಚ್ಹೆಯಂತೆ ಅವಳಿಂದ ಮುಕ್ತಿ ಪಡೆದ.

ಯಾಕೋ ಬೇಜಾರು .........

ಯಾರ ಮುಖವೂ
ಮನಸಲಿ ನಿಲ್ಲುತ್ತಿಲ್ಲ
ಯಾವ ಕನಸು
ಕಣ್ಣಿಗೆ ಹತ್ತುತ್ತಿಲ್ಲ
ಕಡ ತಂದ ಕನಸುಗಳ
ಎದೆಯೊಳಗೆ ಕರೆತರಲು
ಮನಸಿಗೂ
ಮನಸಿಲ್ಲ .....