ಕಣ್ಣಿಗೆ ಕಂಡದ್ದು , ಮನಸಿಗೆ ತೋಚಿದ್ದು.....
ಹೀಗಿದೆ ನೋಡು ಗೆಳೆಯ....
Friday, 28 October 2011
ನೀನೆ
ತುಂಬಿರುವ ಮನಸಿಗೆ
ತಿವಿಯಬೇಡ ಗೆಳತಿ
ನಿನ್ನ ಮೌನದ ಈಟಿಯಿಂದ
ನಿನ್ನ
ಮೃದು ಮಧುರ
ನೆನಪುಗಳಿಗೆ ನೋವಾಗಿ
ಹೊರಟು ಬಿಟ್ಟಾವು ಅಲ್ಲಿಂದ ...
ನಾನು ಮರ
ನೀನು ಬಳ್ಳಿ
ಹಬ್ಬಿದಷ್ಟು ಎತ್ತರ
ತಬ್ಬಿದಷ್ಟು ಮಧುರ
ಅದರೂ ....
ನಮ್ಮ ನಡುವೆ
ಏ ಕಿ ಷ್ಟು
ಅಂತರ ...?
ಕಣ್ಣಲ್ಲಿ
ಇರಿಯುವುದಿಲ್ಲ
ಮಾತಲ್ಲಿ
ತಿವಿಯುವುದಿಲ್ಲ
ಎದುರಾದಾಗಲೆಲ್ಲ
ಸುಮ್ಮನೆ
ನಗುತ್ತಾಳೆ
ಕೊಲ್ಲುವ ಕಲೆ
ಅವಳಿಗೆ ಕರಗತ
Monday, 24 October 2011
ಅವಳ
ಉಸಿರಲ್ಲಿ
ಬೆರೆತು
ಹೋಗಬೇಕೆಂದುಕೊಂಡೆ
ವಿಷವನ್ನೇ ಉಸಿರಾಡಿದಳು
ಅವಳ
ಮಡಿಲಲ್ಲಿ
ಮಗುವಾಗಬೇಕೆಂದುಕೊಂಡೆ
ಉಸಿರನ್ನೇ
ನಿಲ್ಲಿಸಿ ಬಿಟ್ಟಳು
ಚೂರಾದ ಹಾಳೆ
ಆರಿದ ಸಿಗರೇಟು
ಹರಿದ ಚಪ್ಪಲಿ
ಮತ್ತು
ಕಣ್ಣಿನಲಿ ನಿನ್ನ ನಿಶೆ
ನಾನು ನಿಜಕ್ಕೂ
ಸುಖಿ ...
ಹೂವಿಗೇನು ಗೊತ್ತು
ದೇವರ
ತಲೆಯ ಮೇಲೋ
ಹೆಣದ
ಎದೆಯ ಮೇಲೋ
ಅದು
ಎತ್ತಿಕೊಂಡವರ
ಚಿತ್ತ
ನೆರಳಲ್ಲಿ ಮುದುಡುತ್ತದೆ
ಬಿಸಿಲಲ್ಲಿ ಬಾಡುತ್ತದೆ
ತಲೆಯ ಮೇಲಿಟ್ಟರೆ
ಭಕ್ತಿ ಮತ್ತು ಸಂತೋಷ
ಎದೆಯ ಮೇಲಿಟ್ಟರೆ
ದುಃಖ ಮತ್ತು ಕಣ್ಣೀರು
Tuesday, 18 October 2011
ನನ್
ಹೃದಯದಲ್ಲಿ
ಜಾಗ ಖಾಲಿ ಇದೆ
ಅಂತ ಇದುವರೆಗೂ
ಯಾವ್ ಹುಡ್ಗಿನೂ
ಜಾಹಿರಾತು ಕೊಟ್ಟಿಲ್ಲ
ಹಾಗಂತ
ಯಾವ್ ಹುಡುಗರೂ
ಹುಡುಗೀರ
ಅಪ್ಪಣೆ ಕೇಳಿ
ಅವರ ಹೃದಯದೊಳಗೆ
ಪ್ರವೇಶ ಮಾಡಿಲ್ಲ...
ಬದುಕು
ಯಾರೋ
ಬಿಸಾಕಿದ ದಾರಿ
ಸುಮ್ಮನೆ ನಡೆಯಬೇಕು
ಗುರುವು ಬೇಡ ,ಗುರಿಯೂ ಬೇಡ
ದೇಹ
ಚಲಿಸುತ್ತಿದೆ
ಅದಷ್ಟೇ ಸತ್ಯ
ಮತ್ತೆ ಅದರೊಳಗಿನ ಆತ್ಮ ?
ಸಂತೆಯೊಳಗೆ
ಮೌನ ಹುಡುಕಿದಂತೆ
ಎಡವಿದ್ದಕ್ಕೆ ರಕ್ತದ
ಸಾಕ್ಷಿಯಿದೆ
ಮತ್ತೆ ಎದ್ದಿದ್ದಕ್ಕೆ
ಅರ್ಧ ದಾರಿ ಸವೆದಿದೆ
ಗೆದ್ದಿದ್ದಕ್ಕೆ
ರೆಕ್ಕೆಯೇನು ಬಂದಿಲ್ಲ
ಸೋತಿದ್ದಕ್ಕೆ
ನನ್ನಲ್ಲಿ ನೆಪವಿಲ್ಲ ...
ದೇವ್ರು ಅಂತ ಯಾಕೆ ನಿಂಗೆ ಕೈಯ ಮುಗಿಬೇಕು
ಏನು ಕಿಸ್ದಿದ್ದೀ ಅಂತ ಆರತಿ ಬೆಳಗಬೇಕು
ಇರೋ ಕಷ್ಟ ಇದ್ದೆ ಇದೆ ,ನಮಗೇನ ಹೊಸದಲ್ಲ
ನೋಡ್ಕಂಡ್ ಸುಮ್ನೆ ಕುಂತ್ಕಂಡಿದ್ದೀ ,ನಿಂಗೆ ಕಣ್ಣಿಲ್ಲ
ನೀನು ಬರಿ ಕಲ್ಲು ಅಂತ ತಿಳಿದೋರ್ ಹೇಳ್ತಾರೆ
ಅದರೂ ಜನ ಕಷ್ಟ ಅಂದ್ರೆ, ನಿಂಗೆ ಅಡ್ಡ ಬೀಳ್ತಾರೆ
ಜಾತಿಗೊಂದು ಮಟ ಮಾಡಿ ನಿನ್ ದಯೆ ಅಂತಾರೆ
ಧರ್ಮಕ್ಕಿಷ್ಟು ವಿಷ ಬೆರಸಿ ,ಜನಗಳ್ ನೆತ್ತಿ ಸವರ್ತಾರೆ
ಅನ್ನ ಕೊಡೋನ ಬಾಯಿಗೆ ಹಿಡಿ ಮಣ್ಣು ಹಾಕ್ತಾರೆ
ಅವನ ಎದೆ ಮೇಲೆ ರಸ್ತೆ ಮಾಡಿ ನೈಸು ಅಂತಾರೆ
ಒಳಗೊಳಗೆ ದುಷ್ಟರ ಜೊತೆ ಶಾಮೀಲ್ ಆಗ್ಬಿಟ್ಯ
ಪರ್ಸ0ಟೇಜು ಲೆಕ್ಕದಲ್ಲಿ ನೀನು ಡೀಲಿಗ್ ಕುಂತಬಿಟ್ಯ
ಈ ಹಲ್ಕಟ್ ಮಂದಿ ಜೊತೆ ಸೇರಿ ಹಾಳಾಗ್ ಹೋಗ್ಬಿಟ್ಟೆ
ಗ್ರಾನೈಟ್ ಹಾಸಿದ್ ನೆಲದ ಮೇಲೆ ನಿಂತ್ಕಂಡ್ ಹೈಟೆಕ್ ಆಗ್ಬಿಟ್ಟೆ
ಹಿಂಗೆ ಮಾಡ್ತಾ ಹೋದ್ರೆ ನಿಂಗೆ ಕಷ್ಟ ಆಗ್ತದೆ
ಬಡವರ ಸಿಟ್ಟು ರಟ್ಟೆಗೆ ಬಂದ್ರೆ ನಿನ್ ಮಾನ ಹೋಯ್ತದೆ
ಛಿ ಥೂ ಅನ್ನೋಕ್ ಮುಂಚೆ ಒಳ್ಳೆರ್ಗೆ ಒಳ್ಳೇದ್ ಮಾಡ್ಬಿಡು
ಕೆಟ್ಟವರಿಗೆ ಒಂದ್ ದಾರಿ ತೋರ್ಸಿ ದೇವ್ರೇ ಆಗ್ಬಿಡು
Monday, 3 October 2011
ನಿನ್
ಪ್ರೀತಿನ
ಒಂಚೂರು
ಸಾಲ ಕೊಡೆ
ಬೇಕಾದ್ರೆ ... ನನ್ನ ಹೃದಯಾನ
ಅಡ
ಇಟ್ಕೊಂಡ್ ಬಿಡೆ