Tuesday, 18 October 2011

ನನ್
ಹೃದಯದಲ್ಲಿ
ಜಾಗ ಖಾಲಿ ಇದೆ
ಅಂತ ಇದುವರೆಗೂ
ಯಾವ್ ಹುಡ್ಗಿನೂ
ಜಾಹಿರಾತು ಕೊಟ್ಟಿಲ್ಲ

ಹಾಗಂತ
ಯಾವ್ ಹುಡುಗರೂ
ಹುಡುಗೀರ
ಅಪ್ಪಣೆ ಕೇಳಿ
ಅವರ ಹೃದಯದೊಳಗೆ
ಪ್ರವೇಶ ಮಾಡಿಲ್ಲ...
ಬದುಕು
ಯಾರೋ
ಬಿಸಾಕಿದ ದಾರಿ
ಸುಮ್ಮನೆ ನಡೆಯಬೇಕು
ಗುರುವು ಬೇಡ ,ಗುರಿಯೂ ಬೇಡ
ದೇಹ
ಚಲಿಸುತ್ತಿದೆ
ಅದಷ್ಟೇ ಸತ್ಯ
ಮತ್ತೆ ಅದರೊಳಗಿನ ಆತ್ಮ ?
ಸಂತೆಯೊಳಗೆ
ಮೌನ ಹುಡುಕಿದಂತೆ
ಎಡವಿದ್ದಕ್ಕೆ ರಕ್ತದ
ಸಾಕ್ಷಿಯಿದೆ
ಮತ್ತೆ ಎದ್ದಿದ್ದಕ್ಕೆ
ಅರ್ಧ ದಾರಿ ಸವೆದಿದೆ
ಗೆದ್ದಿದ್ದಕ್ಕೆ
ರೆಕ್ಕೆಯೇನು ಬಂದಿಲ್ಲ
ಸೋತಿದ್ದಕ್ಕೆ
ನನ್ನಲ್ಲಿ ನೆಪವಿಲ್ಲ ...

Tuesday, 4 October 2011

ಒಹ್ ದೇವ್ರೇ ..................!!!11

   
ದೇವ್ರು ಅಂತ ಯಾಕೆ ನಿಂಗೆ ಕೈಯ ಮುಗಿಬೇಕು
ಏನು ಕಿಸ್ದಿದ್ದೀ ಅಂತ ಆರತಿ ಬೆಳಗಬೇಕು
ಇರೋ ಕಷ್ಟ ಇದ್ದೆ ಇದೆ ,ನಮಗೇನ ಹೊಸದಲ್ಲ
ನೋಡ್ಕಂಡ್ ಸುಮ್ನೆ ಕುಂತ್ಕಂಡಿದ್ದೀ ,ನಿಂಗೆ ಕಣ್ಣಿಲ್ಲ
ನೀನು ಬರಿ ಕಲ್ಲು ಅಂತ ತಿಳಿದೋರ್ ಹೇಳ್ತಾರೆ
ಅದರೂ ಜನ ಕಷ್ಟ ಅಂದ್ರೆ, ನಿಂಗೆ ಅಡ್ಡ ಬೀಳ್ತಾರೆ
ಜಾತಿಗೊಂದು ಮಟ ಮಾಡಿ ನಿನ್ ದಯೆ ಅಂತಾರೆ
ಧರ್ಮಕ್ಕಿಷ್ಟು ವಿಷ ಬೆರಸಿ ,ಜನಗಳ್ ನೆತ್ತಿ ಸವರ್ತಾರೆ
ಅನ್ನ ಕೊಡೋನ ಬಾಯಿಗೆ ಹಿಡಿ ಮಣ್ಣು ಹಾಕ್ತಾರೆ
ಅವನ ಎದೆ ಮೇಲೆ ರಸ್ತೆ
ಮಾಡಿ ನೈಸು ಅಂತಾರೆ
ಒಳಗೊಳಗೆ ದುಷ್ಟರ ಜೊತೆ ಶಾಮೀಲ್ ಆಗ್ಬಿಟ್ಯ
ಪರ್ಸ0ಟೇಜು ಲೆಕ್ಕದಲ್ಲಿ ನೀನು ಡೀಲಿಗ್ ಕುಂತಬಿಟ್ಯ

ಈ ಹಲ್ಕಟ್ ಮಂದಿ ಜೊತೆ ಸೇರಿ ಹಾಳಾಗ್ ಹೋಗ್ಬಿಟ್ಟೆ
ಗ್ರಾನೈಟ್ ಹಾಸಿದ್ ನೆಲದ ಮೇಲೆ ನಿಂತ್ಕಂಡ್ ಹೈಟೆಕ್ ಆಗ್ಬಿಟ್ಟೆ
ಹಿಂಗೆ ಮಾಡ್ತಾ ಹೋದ್ರೆ ನಿಂಗೆ ಕಷ್ಟ ಆಗ್ತದೆ
ಬಡವರ ಸಿಟ್ಟು ರಟ್ಟೆಗೆ ಬಂದ್ರೆ ನಿನ್ ಮಾನ ಹೋಯ್ತದೆ

ಛಿ ಥೂ ಅನ್ನೋಕ್ ಮುಂಚೆ ಒಳ್ಳೆರ್ಗೆ ಒಳ್ಳೇದ್ ಮಾಡ್ಬಿಡು
ಕೆಟ್ಟವರಿಗೆ ಒಂದ್ ದಾರಿ ತೋರ್ಸಿ ದೇವ್ರೇ ಆಗ್ಬಿಡು

Monday, 3 October 2011

ನಿನ್
ಪ್ರೀತಿನ
ಒಂಚೂರು
ಸಾಲ ಕೊಡೆ
ಬೇಕಾದ್ರೆ ...
ನನ್ನ ಹೃದಯಾನ
ಅಡ
ಇಟ್ಕೊಂಡ್ ಬಿಡೆ

Saturday, 1 October 2011

ಜಗತ್ತಿನ
ಎಲ್ಲ ಸುಖಾನೂ
ತಂದು
ನಿನ್ನ ಮುಂದೆ
ಸುರಿತೀನಿ ಅಂತ
ಅಂಗೈಯಲ್ಲಿ
ಆಕಾಶ ತೋರಿಸಲ್ಲ ಕಣೇ
ನಾನೇ
ನಿನ್ನ ಜಗತ್ತಾಗಿರುವಾಗ
ಬೇರೆಲ್ಲ
ಬರೀ ಸುಳ್ಳು ಕಣೇ

Friday, 30 September 2011

ಹಾಗೆ ಸುಮ್ಮನೆ ಹೊಳೆದದ್ದು !!

ಹುಡುಗಿಯರ ಬಹು ದೊಡ್ಡ ಶಕ್ತಿಯೆಂದರೆ ಮುಗುಳ್ನಗೆ ಮತ್ತು ಕಣ್ಣೀರು ...
ಕಾದು
ಕನಲಿದ
ನಿನ್ನೊಳಗೆ
ಹನಿ ಹನಿಯಾಗಿ
ಇಳಿದ 
ಮಳೆ ನಾನು
ಎಷ್ಟು
ಸುರಿದರೂ
ತಂಪಾಗದ
ಅತೃಪ್ತ
ಭುವಿ ನೀನು

ಬೆಚ್ಚನೆಯ ಒಲವಿಲ್ಲ
ಅಪ್ಪುಗೆಯ ಬಲವಿಲ್ಲ
ನನ್ನ ನಿನ್ನ ನಡುವೆ
ಆದರೂ
ನಿನ್ನ ಬಿಡೆನು
ಕಾರಣ
ನಿನ್ನ ' ನಡು' ವೆ
ನನ್ನ
ಚಿತ್ತ ಭಿತ್ತಿಯ ತುಂಬೆಲ್ಲ
ನಿನ್ನದೇ
ನೆನಪುಗಳು ಚಿನ್ನಾ
ಅಳಿಸಿಬಿಡು
ಅವುಗಳನ್ನು
ನಾ ಅಳಿಯುವ ಮುನ್ನಾ
ಮದನ
ಮದನಿಕೆಯರ
ಮುಗಿಯದ ಕದನ
ಯಾರಾದ್ರೂ
ನೋಡೋಕೆ ಮುನ್ನ
ಹಾಕಿಕೊಳ್ಳಲಿ
ಅವರ ಕೋಣೆ 'ಕದ'ನ