Tuesday, 29 November 2011

ಹಂ ತುಂ ಒಂದಾದ ಮೇಲೂ
ಏಕ್ ಮುತ್ತು ಬೀ ತುಂ ನಹಿ ದಿಯಾ
ಇವತ್ ದಿಯಾ ನಾಳೆ ದಿಯಾ ಅಂತ
ಕಿತನಾ ಬಾರಿ ಮೇರೆ ಕೋ ಕಾಗೆ ಹಾರಿಸ್ತಿಯಾ
ತುಂ ಹಿಂಗೆ ಚುಪ್ಕೆ ಚುಪ್ಕೆ ಜೂಟ್ ಬೋಲ್ತಿದ್ರೆ
ಮೆ ಬೇರೆ ಲಡ್ಕಿ ಗೆ ಪ್ಯಾರ್ ಕರೂಂಗಾ ಅಷ್ಟೆಯಾ

Monday, 28 November 2011

ಸುಮ್ಮನೆ ಬೀಸುವ
ತಂಗಾಳಿಗೆ ಯಾವುದೋ ಹಠ
ಮರೆತ ಮಾತನು
ಮನದಂಗಳಕೆ ತಂದು
ಮನ ನೋಯಿಸುವ ಚಟ

Friday, 25 November 2011

ಮನಸು ಮುರಿದ
ನಿನ್ನ
ಮಧುರ ಮಾತುಗಳಿಂದ
ಶಿಥಿಲಗೊಂಡ

ನನ್ನಂತರಂಗದ
ಕೊಳದಿ
ತೇಲುತಿವೆ
ನಿನ್ನ ನೆನಪುಗಳು
ದಿಕ್ಕಿಲ್ಲದ
ಹೆಣಗಳು ಗಂಗೆಯಲಿ
ತೇಲಿದಂತೆ ..

Wednesday, 16 November 2011

ಪ್ರೀತಿ

ಹೆಪ್ಪುಗಟ್ಟಿದ
ಮೋಡ
ಮಳೆಯಾಗಿ
ಸುರಿದು
ಭೂಮಿ
ಹಸಿರಾದ ರೀತಿ

ರಾತ್ರಿಯ
ನೀರವ ಮೌನದಲ್ಲಿ
ನಿನ್ನ ನೆನಪುಗಳ ಸಂತೆ
ಕನಸುಗಳಿಗೆ ಕೊಳ್ಳಿಯಿಟ್ಟು
ಹೃದಯ ಚೂರಾಗಿಸಿದರೂ
ನನಗೆ ನಿನ್ನದೇ ಚಿಂತೆ ..
ನಿನ್ನ
ನೆನಪಿನ
ವಿರಹದುರಿಯಲ್ಲಿ
ಬೆಂದ ನಾನು
ನೀರಿಲ್ಲದೆ
ಒದ್ದಾಡುವ ಮೀನು
ನಿನ್ನೊಂದಿಗೆ
ಕಳೆದ ಸವಿಕ್ಷಣಗಳು
ನೆನಪುಗಳಾಗಿ
ಅಲೆಯುತಿವೆ
ನೀನೆ ಕೆಡವಿದ
ನಮ್ಮ ಒಲವ
ಮಹಲಿನ ಸುತ್ತ ..

Tuesday, 15 November 2011

ನನಗೆ
ದುಖಃವಾಗಿದ್ದು
ನೀನು ನನ್ನ
ಬಿಟ್ಟು ಹೋದದ್ದಕ್ಕಲ್ಲ
ನನ್ನ
ಕಳೆದುಕೊಂಡಿದ್ದಕ್ಕೆ ..

Saturday, 12 November 2011

ಸುಮ್ಮನಿದ್ದು
ಬಿಡು ಮನವೇ
ನನ್ನೆದೆಯ
ತಿಳಿಗೊಳದಿ
ಅವಳ
ನೆನಪುಗಳ ತೇಲಿ ಬಿಟ್ಟು
ರಾಡಿಯೆಬ್ಬಿಸದಿರು
ಹೊಸದೊಂದು
ಮೊಗ್ಗು ನನ್ನೊಳಗೆ
ಹೂವಾಗುವ ಪುಳಕ
ಮತ್ತೆ
ಆಟ
ಕೆಡಿಸದಿರು...
ನಿನ್ನಲ್ಲಿ
ನಾನಿಲ್ಲ
ಹಾಗಾಗಿ
ನೀ ಮುಡಿವ
ಮಲ್ಲಿಗೆಗೂ
ಘಮವಿಲ್ಲ ....