Monday, 7 November 2011


ನೀನು
ನಿಜವಾಗದ
ಕನಸೆಂದು
ನನ್ನ ಮನಸಿಗೆ  ಗೊತ್ತಿದೆ
ಕನಸಿನಲ್ಲಾದರೂ
ನಿಜವಾಗಲಿ ಎಂದು
ಅದು ಕಾಯ್ತಿದೆ ..
ಪ್ರೀತಿ

ಮುಂಜಾನೆಯ
ಎಳೆ ಬಿಸಿಲ
ಸ್ಪರ್ಶಕ್ಕೆ
ಮಂಜು ಕರಗಿ
ನೀರಾದ ರೀತಿ
ನಿನ್ನೊಲವ
ಚಿಲುಮೆ ಬತ್ತಿ
ನನ್ನೆದೆಯ
ಹೊಲವೀಗ
ಬರಡು ಬರಡು ..
ನಿನ್ನೆಲ್ಲ
ಒಲವು
ಮಳೆಯಾಗಿ
ಸುರಿದು
ಬರಡಾದ
ಹೃದಯದಲಿ
ಹಸಿರು
ಚಿಗುರಿಸಲಿ ...
ನನ್ನ
ಬದುಕಿನ
ಕತ್ತಲ ದಾರಿಗೆ
ನಿನ್ನ ನಗೆಯೇ
ಬೆಳದಿಂಗಳು
ಹೊಳೆವ
ಬೆಳಕನು ಕಂಡು
ನಾಚಬೇಕು
ಆ ಚಂದ್ರನು ..
..

Sunday, 30 October 2011

ಅಲೆದದ್ದು ಸಾಕು
ಬಿಕನಾಸಿಯಂತೆ
ಪಕ್ಕಕ್ಕೆ ಒಬ್ಬಳು ಬರಲಿ
ಎಂದರು ಮನೆಯವರು
ದಿಕ್ಕಿಲ್ಲದ ಮನೆ ಹುಡುಗಿ
ಸುರ ಸುಂದರಿ
ಹುಡುಗ ಹೇಗೆ ?
ಕೇಳಲಿಲ್ಲ ಅವರು
ಇವರು ಹೇಳಲಿಲ್ಲ
ಕೆಲಸ
ಜಾಸ್ತಿ ಅವನಿಗೆ
ಬಾರು ,ಪಬ್ಬು ,ಸಿಗರೇಟು
ಇಸ್ಪೀಟು ಅಡ್ದೆಯಲಿ
ಥೇಟ್ ಧರ್ಮರಾಯ
ಅದರೂ ನಮ್ಮ ಹುಡುಗ
ಪುಟಕ್ಕಿಟ್ಟ ಚಿನ್ನ
(ಸ್ವಗತ) ಒತ್ತೆಯಿಟ್ಟ ಚಿನ್ನ
ಇನ್ನು ಬಿಡಿಸಿಕೊಂಡಿಲ್ಲ
ಒಳಮನೆಯಲ್ಲಿ
ಹುಡುಗಿ
ಕಣ್ಣೀರಿಡುತ್ತಿದೆ
ಪಡಸಾಲೆಯ ಮಂದಿಗೆ
ಮುಖವಿಲ್ಲ
ಸುಮ್ಮನೆ ಬಿಂಕದ ಮಾತು
ಇಲ್ಲೇನು ಕಡಿಮೆ ನಿನಗೆ
ಎಲ್ಲವು ಇದೆ
ಬೇಕಾದ್ದು ಬಿಟ್ಟು
ತುಟಿಗೆ ಬಂದ ಮಾತು
ಗಂಟಲಲ್ಲೇ ಉಳಿಯುತ್ತದೆ
ಈಗೀಗ
ಹುಡುಗಿ ನಗುವುದನ್ನು
ರೂಡಿ ಮಾಡಿಕೊಂಡಿದೆ
ಲೋಕದ ಕಣ್ಣಿಗೆ ಮಾತ್ರ
ದೊಡ್ಡವರ ಮನೆ ಜನ
ಅವಳ ಕಣ್ಣೀರನ್ನು
ಪ್ರತಿಷ್ಠೆಯ ಮುಖವಾಡದ
ಹಿಂದೆ ಬಚ್ಚಿಡಲಾಗಿದೆ
ಅವಳ
ಪ್ರಶ್ನೆಗಳಿಗೆ
ಅವನಲ್ಲಿ ಉತ್ತರವಿಲ್ಲ
ಅವಳ
ಮೌನ ಮತ್ತು ನಗುವನ್ನು
ಎದುರಿಸಲು ದೈರ್ಯವು ಇಲ್ಲ
.

ಬೆಂಗಳೂರು

ಇಲ್ಲಿ
ಬದುಕು ದುಬಾರಿ
ಸಾವು ಬಿಕಾರಿ

Friday, 28 October 2011

ನೀನೆ
ತುಂಬಿರುವ ಮನಸಿಗೆ
ತಿವಿಯಬೇಡ ಗೆಳತಿ
ನಿನ್ನ ಮೌನದ ಈಟಿಯಿಂದ
ನಿನ್ನ
ಮೃದು ಮಧುರ
ನೆನಪುಗಳಿಗೆ ನೋವಾಗಿ
ಹೊರಟು ಬಿಟ್ಟಾವು  ಅಲ್ಲಿಂದ ...

ನಾನು ಮರ
ನೀನು ಬಳ್ಳಿ
ಹಬ್ಬಿದಷ್ಟು ಎತ್ತರ
ತಬ್ಬಿದಷ್ಟು ಮಧುರ
ಅದರೂ ....
ನಮ್ಮ ನಡುವೆ

ಕಿ
ಷ್ಟು
ಅಂತರ ...?
ಕಣ್ಣಲ್ಲಿ
ಇರಿಯುವುದಿಲ್ಲ
ಮಾತಲ್ಲಿ
ತಿವಿಯುವುದಿಲ್ಲ
ಎದುರಾದಾಗಲೆಲ್ಲ
ಸುಮ್ಮನೆ
ನಗುತ್ತಾಳೆ
ಕೊಲ್ಲುವ ಕಲೆ
ಅವಳಿಗೆ ಕರಗತ