ಕಣ್ಣಿಗೆ ಕಂಡದ್ದು , ಮನಸಿಗೆ ತೋಚಿದ್ದು.....
ಹೀಗಿದೆ ನೋಡು ಗೆಳೆಯ....
Monday, 29 August 2011
ಹುಡುಗಿ
ನಿನ್ನ
ಕಣ್ಣಂಚಿಗೆ
ಅದರ
ಸುಳಿಮಿಂಚಿನ ಸಂಚಿಗೆ
ಬಲಿಯಾದೆ
ಈಗ
ರಸ್ತೆಯಂಚಲೇ
ನೆಲೆಯಾದೆ ...
ನಿನ್ನ
ನೆನಪೆಲ್ಲ
ಕಣ್ಣೀರಾಗಿ
ಸುರಿದ ಮೇಲೆ
ಮನಸೀಗ
ಶುಭ್ರ ಶಾಂತ ಸರೋವರ ....
ನಿನ್ನ ಪಾಲಿಗೆ
ನಾನು
ಮುಗಿದ ಅಧ್ಯಾಯ
ಸಂತೋಷವೆಂದರೆ
ನನ್ನ ಬದುಕಿಗೂ
ಇಂದೇ ವಿಧಾಯ
ಹುಣ್ಣಿಮೆಯ
ಚಂದ್ರ
ನಗುತ್ತಿದ್ದಾನೆ
ಇರುಳು
ಬೆತ್ತಲಾಗುತ್ತಿದೆ ....
Friday, 26 August 2011
ನಿನ್ನ
ನೆನಪುಗಳ
ಅಪಶ್ರುತಿಯಿಂದ
ನನ್ನೊಳಗಿನ
ಹೊಸರಾಗವೊಂದು
ಹಾಡಾಗುತ್ತಲೇ
ಇಲ್ಲ .....
ಬೊಗಸೆ
ತುಂಬ ಪ್ರೀತಿ
ಕಣ್ಣಲ್ಲಿ
ಮುಗಿಯದ
ಕನಸುಗಳ ಬೆಳಕು
ಹೃದಯದಿ
ಸಾವಿರ
ಆಸೆಗಳ ನಗಾರಿ
ನಿನ್ನ ಪ್ರೀತಿಯಲಿ
ನಾನು
ಪೂರ್ಣ ವ್ಯಸ್ತ
ನೀ
ಕೈ ಕೊಡವಿ
ಹೋದೆ ನೋಡು
ಅಲೆಗೆ ಸಿಕ್ಕ
ಮರಳಿನ ಗೋಪುರ
ಕುಸಿದಂತೆ
ಬದುಕಿಂದು ಅಸ್ತವ್ಯಸ್ತ
ಮೋಸ
ಮನದ ಮುಗಿಲಲ್ಲಿ
ಒಲವಿನ
ನಕ್ಷತ್ರವಾಗಬೇಕಿದ್ದ
ನೀನು
ಉಲ್ಕೆಯಂತೆ ಉರಿದು
ನನ್ನನ್ನೇ ಸುಟ್ಟಿದ್ದು......
Tuesday, 23 August 2011
ಏನೂ ಹೇಳದ
ಮಾತಿನ
ಹಂಗೇಕೆ ಪ್ರೀತಿಗೆ
ಕಣ್ಣ ಭಾಷೆಯೇ
ಸಾಕಲ್ಲವೇ ಸಾಕ್ಷಿಗೆ ....
ನಿನ್ನ
ಚಂದವ
ಏನೆಂದು ಬಣ್ಣಿಸಲಿ
ಎಂಬುದೇ ತಲೆಬಿಸಿ
ಕೇಳಿಸಿಕೊಂಡರೆ ಆ ಚಂದ್ರನಿಗೂ
ಅಸಹನೆಯ ಕಸಿವಿಸಿ
ಅಂದು
ನಿನ್ನ ಪ್ರೀತಿಯ
ಸುತ್ತ
ಬರಿದೆ ಭ್ರಮೆಯ ಚೌಕಟ್ಟು
ತಿಳಿಯಲಿಲ್ಲ ಮೌನದ ಮುಸುಕು ಹೊದ್ದ
ನಿನ್ನ ಅಂತರಂಗದ
ಒಳಗುಟ್ಟು
ಇಂದು
ಕಾಯುತ್ತಿದ್ದೇನೆ
ಉಸಿರು ನಿಲ್ಲುವ
ಕೊನೆಯ ಕ್ಷಣಕ್ಕಾಗಿ
ಬದುಕನ್ನೇ
ವಿಧಿಯ ಕೈಗಿಟ್ಟು